ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯೂ ಮೆಕ್ಸಿಕೊ ಪ್ರಾಂತ್ಯದ ಅತ್ಯಂತ ದೊಡ್ಡನಗರ. ಸಮುದ್ರಮಟ್ಟಕ್ಕಿಂತ 5196’ ಎತ್ತರದಲ್ಲಿದೆ. ಜನಸಂಖ್ಯೆ 96,815 (1950) ವಾಯುಗುಣ ಹಾಗೂ ವೈದ್ಯಕೀಯ ಅನುಕೂಲತೆಗಳಿಂದ ಆರೋಗ್ಯಧಾಮವೆನಿಸಿದೆ. ರೈಲು ಹಾಗೂ ವಿಮಾನಗಳ ಸಂಪರ್ಕವುಂಟು. 

ಪಶುಪಾಲನೆ, ಗಣಿ ಕೈಗಾರಿಕೆ ಹಾಗೂ ಮರದ ಸಾಮಗ್ರಿಗಳ ಉದ್ಯಮ ಚೆನ್ನಾಗಿ ಬೆಳೆದಿದೆ. ಅಲ್ಲದೆ ಹತ್ತಿರದ ಇತರ ಪಟ್ಟಣಗಳಿಗೂ ಈ ಸಾಮಗ್ರಿಗಳ ಉದ್ಯಮ ಚನ್ನಾಗಿ ಬೆಳೆದಿದೆ. ಅಲ್ಲದೆ ಹತ್ತಿರದ ಇತರ ಪಟ್ಟಣಗಳಿಗೂ ಈ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಅನೇಕ ಬಗೆಯ ಯಂತ್ರೋಪಕರಣದ ಕೈಗಾರಿಕೆಗಳೂ ಇವೆ. ಇಲ್ಲಿ ನ್ಯೂ ಮೆಕ್ಸಿಕೊ ಒಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದೆ (1892).	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ